ಪ್ರತಿಯೊಬ್ಬ ಭಾರತೀಯ ಭಾರತದ ಧರ್ಮ, ಸಂಸ್ಕೃತಿ, ಸಮಾಜದ ಬಗ್ಗೆ ತಿಳಿದಿಕೊಳ್ಳುವ ಅವಶ್ಯಕತೆ ತುಂಬಾ ಇದೆ. ಜಗತ್ತಿನ ಹಿಂದೆ ಇದ್ದಂತ, ಈಗಿರುವ, ಅಥವಾ ಮುಂದೆ ಬರಬಹುದಾದ ಅನೇಕ ಗಹನವಾದ ಸಮಸ್ಯೆಗಳಿಗೆ ನಮ್ಮ ಪೂರ್ವಜರು ಅನೇಕ ವಿಧವಾದ ಪರಿಹಾರಗಳನ್ನು ಕೊಟ್ಟಿದ್ದಾರೆ. ಇದನ್ನು ಹೆಚ್ಚು ಹೆಚ್ಚು ತಿಳಿದಿಕೊಂಡಷ್ಟು ಜೀವನಕ್ಕೆ ಸರಿಯಾದ ದೃಷ್ಟಿ ಸಿಗುತ್ತಾ ಹೋಗುತ್ತದೆ. ಇಂದಿನ ಪರಿಸ್ಥಿತಿಗೆ ತಕ್ಕಂತೆ ಪರಿಹಾರವನ್ನು ಹುಡುಕಬೇಕಿದೆ.
ನೂರಾರು ಪ್ರಶ್ನೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ:
ವ್ಯಕ್ತಿಯ ವಿಕಾಸ ಎಂದರೇನು ? ಹೆಚ್ಚು ಹಣ ಸಂಪಾದನೆಯೇ ? ಪದವಿಯೇ ?
ಸಮಾಜದಲ್ಲಿ ನಿಸ್ವಾರ್ಥತೆಯಿಂದ ಜೀವನ ಮಾಡುತ್ತಿರುವ ವ್ಯಕ್ತಿಗಳು ಕಾಣಸಿಗುತ್ತಾರೆಯೇ ?
ಸುಖ ಯಾವುದರಲ್ಲಿದೆ ? ಹೊರಗಿನ ಪ್ರಪಂಚದಲ್ಲೋ ಅಥವಾ ಮನಸ್ಸಿನಲ್ಲೋ ?
ಸಮಾಜದಲ್ಲಿರುವ ಅಸ್ಪ್ರುಶ್ಯತೆ ಸರಿಯೇ ? ಅದರ ನಿವಾರಣೆ ಹೇಗೆ ?
ಮಾತೃಭಾಷೆಯಲ್ಲಿ ಶಿಕ್ಷಣ ಅವಶ್ಯಕವೇ ?
ಅತೀ ನಗರೀಕರಣ ಅವಶ್ಯವೇ ?
ವಿಜ್ಞಾನದ ಪ್ರಗತಿ ಆಗುವಷ್ಟು ವೇಗದಲ್ಲಿ ಮನುಷ್ಯನ ಚಿಂತನೆಗಳ ಸುಧಾರಣೆ ಆಗುತ್ತಿದೆಯೇ?
ವಿಜ್ಞಾನದ ಪ್ರಗತಿ ಆಗುವಷ್ಟು ವೇಗದಲ್ಲಿ ಮನುಷ್ಯನ ಚಿಂತನೆಗಳ ಸುಧಾರಣೆ ಆಗುತ್ತಿದೆಯೇ?
ನಮ್ಮ ಶಿಕ್ಷಣ ಹೇಗಿದೆ ?
ಶಾಲಾ ಕಾಲೇಜುಗಳಲ್ಲಿ ಗುಣ ನಿರ್ಮಾಣದ ಕೆಲಸ ಆಗುತ್ತಿದೆಯೇ ?
ವ್ಯಕ್ತಿಗಳ ಆರೋಗ್ಯ ಸುಧಾರಣೆಯಾಗಿದೆಯೇ? ವೈದ್ಯರು ಸೇವಾ ಭಾವನೆಯಿಂದ ಕೆಲಸ ಮಾಡುತ್ತಿದ್ದಾರೆಯೇ ?
ಮುಂದಿನ ಜನಾಂಗಕ್ಕೆ ಬೇಕಾಗುವಂತೆ ಪರಿಸರವನ್ನು ನಾವು ಸಂರಕ್ಷಣೆ ಮಾಡುತ್ತಿದ್ದೇವೆಯೇ ?
ನಮ್ಮ ಪೂರ್ವಜರು ನಮಗೆ ಕೊಟ್ಟಂತಹ ಸಂಸ್ಕೃತಿ, ಭಾಷೆ, ಕಲೆಯನ್ನು ಸಂರಕ್ಷಿಸಿ ಬೆಳೆಸುವಂತ ಕೆಲಸ ಆಗುತ್ತಿದೆಯೇ?
ಸರ್ಕಾರ ಜನರ ಹಿತಕ್ಕೋಸ್ಕರ ಕೆಲಸ ಮಾಡುತ್ತಿದೆಯೇ ?
ನಮ್ಮ ದೇಶದ ಸಮಗ್ರ ಉನ್ನತಿಯ ಚಿಂತನೆಯನ್ನು ಯಾರು ಮಾಡುತ್ತಿದ್ದಾರೆ ?
ನಮ್ಮ ದೇಶದ ರಕ್ಷಣೆಯ ಬಗ್ಗೆ ಯೋಚನೆ ಆಗುತ್ತಿದೆಯೇ ?
ಸಮಾಜದಲ್ಲಿರುವ ವ್ಯಕ್ತಿಗಳು ಹೋಗುತ್ತಿರುವ ದಿಕ್ಕು ಸರಿ ಇದೆಯೇ ? ಸ್ವಂತಿಕೆ ಇದೆಯೇ ?
ನಾವು ಹೋಗುತ್ತಿರುವ ದಿಕ್ಕು ಸರಿಯಿದೆ ಎಂಬುದಕ್ಕೆ ಅಧಾರ ಏನು ?
ಈ ರೀತಿಯ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡುವ ಸಾಮರ್ಥ್ಯ ನಮ್ಮ ಯುವ ಪೀಳಿಗೆಗೆ ಬರಬೇಕಾಗಿದೆ. ಹಿಂದೂ ಧರ್ಮದಲ್ಲಿ ನಿಜವಾದ ಸತ್ವ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಷ್ಟೆ.
ವ್ಯಕ್ತಿಯ ಸತ್ವ ಹೆಚ್ಚಾಗಬೇಕು ಎಂದರೆ ಶಾರೀರಿಕ, ಬೌಧ್ಧಿಕ, ಮಾನಸಿಕ ಮತ್ತು ಆತ್ಮಿಕ ವಿಕಾಸ ಆಗಬೇಕು. ಸಮಗ್ರ ವಿಕಾಸಕ್ಕೆ ಸಂಸ್ಕಾರ ಬೇಕು. ಈ ರೀತಿಯ ವ್ಯಕ್ತಿಗಳೇ ನಮ್ಮ ರಾಷ್ಟ್ರೀಯತೆಯ ವೃಕ್ಷದ ಬೇರುಗಳಾಗಿ ಕೆಲಸ ಮಾಡುತ್ತಾರೆ.